ಕರ್ನಾಟಕ ರಾಜ್ಯೋತ್ಸವದ ವರದಿ ೨೦೨೩ -೨೦೨೪
೧ ನವೆಂಬರ್ ೨೦೨೩ ಬುಧವಾರದಂದು ನಮ್ಮ ಶಾಲೆಯಲ್ಲಿ, ೬೮ ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲರು, ಸಂಯೋಜಕರು ಮತ್ತು ಶಿಕ್ಷಕ ವೃಂದದವರು ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟçಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ರಾಷ್ಟçಗೀತೆ, ನಾಡಗೀತೆ ಮತ್ತು ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕöÈತಿಯ ಹಿರಿಮೆಯನ್ನು ಸಾರುವಂತಹ ಕವಿ ಚೆನ್ನವೀರ ಕಣಿವಿಯವರ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಹಾಡನ್ನು ಹಾಡುವುದರ ಮೂಲಕ ಕನ್ನಡದ ಅಭಿಮಾನವನ್ನು ಮಕ್ಕಳಲ್ಲಿ ಹೆಚ್ಚಿಸಿದರು. ಹೀಗೆ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”