VAG INDIA TRUST
Dream World School


 

ಕರ್ನಾಟಕ ರಾಜ್ಯೋತ್ಸವದ ವರದಿ 2022 -2023


        ನವೆಂಬರ್ 1, 2022 ರ ಮಂಗಳವಾರದಂದು ನಮ್ಮ ಶಾಲೆಯಲ್ಲಿ, 67 ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಕೆ. ಚೆನ್ನಪ್ಪರವರು, ಶ್ರೀಯುತ ಎನ್. ಬಸವರಾಜ್‍ರವರು, ಶಾಲೆಯ ಮುಖ್ಯಸ್ಥರಾದ    ಕೆ. ಅನಿಲ್ ಬಾಬುರವರು ಮತ್ತು ಶಿಕ್ಷಕ ವೃಂದದವರು ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

      ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಹಿರಿಮೆಯನ್ನು ಸಾರುವಂತಹ ಹಾಡುಗಳು, ಕಿರುನಾಟಕ, ಏಕಪಾತ್ರಾಭಿನಯ, ಸಾಮೂಹಿಕ ನೃತ್ಯ, ಸ್ವರಚಿತ ಕವನ ವಾಚನ ಮತ್ತು ಭಾಷಣಗಳನ್ನು ಪ್ರಸ್ತುತ ಪಡಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. 


 

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳು, ಕನ್ನಡ ಭಾಷೆಯು ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಕ್ರಿ. ಪೂ. ಕಾಲದಿಂದಲ್ಲೂ ಸಹ ಕನ್ನಡದ ಅಸ್ತಿತ್ವವನ್ನು ಕಾಣಬಹುದು. ಕಪ್ಪೆ ಅರೆಭಟ್ಟನ ಶಾಸನದಲ್ಲಿ ಕನ್ನಡಿಗರನ್ನು ಕುರಿತು ಮಾಡಿರುವ ಗುಣಗಾನ, ಕನ್ನಡ ಸಾಹಿತ್ಯ ಚರಿತ್ರೆ ಬೆಳದು ಬಂದ ರೀತಿ ಮತ್ತು ಕನ್ನಡವು, ಭಾರತ ಮಾತೆಯ ಹಿರಿಯಪುತ್ರಿ. ನಾವು ಮೊದಲು ಭಾರತೀಯರು ಎಂಬುದನ್ನು ಮರೆಯಬಾರದು ಎಂಬ ಕುವೆಂಪುರವರ ಮಾತನ್ನು ನೆನಪಿಸಿದರು ಹಾಗೂ ಕರ್ನಾಟಕ ರಾಜ್ಯೋತ್ಸವ ಎಂಬುದು ಪ್ರತಿ ಮನೆ-ಮನಗಳಲ್ಲಿ ನಿತ್ಯ ಬಳಸಿ, ಬೆಳೆಸುವ ಮೂಲಕ ನಿತ್ಯೋತ್ಸವವಾಗಬೇಕು ಎಂಬುದರ ಜೊತೆಗೆ ಕುವೆಂಪುರವರ ‘ಬಾರಿಸು ಕನ್ನಡ ಡಿಂಡಿಮವ’ ಎನ್ನುವ ಹಾಡನ್ನು ಸುಮಧುರ ಕಂಠದಲ್ಲಿ ಹಾಡುವ ಮೂಲಕ ಎಲ್ಲರಲ್ಲಿಯೂ  ಕನ್ನಡದ ಪ್ರೇಮವನ್ನು ಜಾಗೃತಗೊಳಿಸಿದರು.


“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”


 

Images